ಝೈನ್ ಇಮಾಮ್ ರವರು ಒಬ್ಬ ಭಾರತೀಯ ದೂರದರ್ಶನ ನಟರಾಗಿದ್ದು, ಪ್ರಮುಖವಾಗಿ 'ಠಶ್ನ್ ಎ ಇಶ್ಕ್' ನಲ್ಲಿ ಯುವರಾಜ್ ಲೂಥ್ರಾ ಎಂಬ ಪಾತ್ರದಲ್ಲಿ,'ನಾಮ್ಕರಣ್' ನಲ್ಲಿ ನೀಲ್ ಖನ್ನಾ ಎಂಬ ಪಾತ್ರದಲ್ಲಿ, ಹಾಗೆಯೇ 'ಏಕ್ ಭ್ರಮ್ ಸರ್ವಗುಣ್ ಸಂಪನ್ನ' ದಲ್ಲಿ ಕಬೀರ್ ಮಿಟ್ಟಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಆರಂಭಿಕ ಜೀವನ == ಝೈನ್ ಇಮಾಮ್ ರವರು ಅಮಿಟಿ ಇಂಟರ್ನ್ಯಾಷನಲ್ ಬಿಸಿನೆಸ್ ಸ್ಕೂಲ್ ನಿಂದ ಎಂ.ಬಿ.ಎ ಶಿಕ್ಷಣ ಪಡೆದರು.ಪದವಿ ಪಡೆದ ನಂತರ ಅವರು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರು.ಆದರೆ ನಂತರ ಅವರು ತಮ್ಮ ಕೆಲಸವನ್ನು ತೊರೆದು ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. == ವೃತ್ತಿ ಜೀವನ == ಝೈನ್ ಇಮಾಮ್ ರವರು ಎಂಟಿವಿ ಇಂಡಿಯಾದ 'ಕೈಸಿ ಯೇ ಯಾರಿಯಾ'ದೊಂದಿಗೆ ತಮ್ಮ ದೂರದರ್ಶನ ವೃತ್ತಿಯನ್ನು ೨೦೧೪ ರಲ್ಲಿ ಪ್ರಾರಂಭಿಸಿದರು.ಅದರಲ್ಲಿ ಅವರು ಅಭಿಮನ್ಯು ಥಕ್ಕರ್ ಪಾತ್ರದಲ್ಲಿ ಅಭಿನಯಿಸಿದರು.೨೦೧೫ ರಿಂದ ೨೦೧೬ ರವರೆಗೆ ಅವರು ಝೀ ಟಿವಿಯ 'ಠಶ್ನ್ ಎ ಇಶ್ಕ್' ನಲ್ಲಿ ಯುವರಾಜ್ ಲೂಥ್ರಾ ಪಾತ್ರದಲ್ಲಿ ಕಾಣಿಸಿಕೊಂಡರು.ನಕಾರಾತ್ಮಕ ಪಾತ್ರದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಗೋಲ್ಡ್ ಅವಾರ್ಡ್ಸ್ ನಲ್ಲಿ ಪಡೆದುಕೊಂಡರು.೨೦೧೬ ರಿಂದ ೨೦೧೭ ರವರೆಗೆ ಇಮಾಮ್ ರವರು ಝೀ ಟಿವಿಯ 'ಯೆ ವಾದಾ ರಹಾ' ದಲ್ಲಿ ಅಭೀರ್ ಧರ್ಮಾಧಿಕಾರಿ ಎಂಬ ಪಾತ್ರವನ್ನು ವಹಿಸಿದರು.೨೦೧೭ ರಿಂದ ೨೦೧೮ ರವರೆಗೆ ಸ್ಟಾರ್ ಪ್ಲಸ್ ನ 'ನಾಮ್ಕರಣ್' ನಲ್ಲಿ ನೀಲ್ ಖನ್ನಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಜೂನ್ ೨೦೧೮ ರಲ್ಲಿ,'ಲಾಲ್ ಇಶ್ಕ್' ನಲ್ಲಿ ಅರ್ಜುನ್ ಪಾತ್ರ ಹಾಗೂ ಸೆಪ್ಟೆಂಬರ್ ೨೦೧೮ ರಲ್ಲಿ ಸ್ಟಾರ್ ಪ್ಲಸ್ ನ 'ಇಶ್ಕ್ ಬಾಝ್' ನಲ್ಲಿ ಮೋಹಿತ್ ಪಾತ್ರದಲ್ಲಿ ಅಭಿನಯಿಸಿದರು.೨೦೧೯ ರಲ್ಲಿ ಅವರು ಕಲರ್ಸ್ ಟಿವಿಯ 'ಖತ್ರೋನ್ ಕೆ ಕಿಲಾಡಿ ೯' ರಲ್ಲಿ ಭಾಗವಹಿಸಿದರು.ಏಪ್ರಿಲ್ ೨೦೧೯ ರಿಂದ ಝೈನ್ ಇಮಾಮ್ ರವರು ಸ್ಟಾರ್ ಪ್ಲಸ್ ನ 'ಏಕ್ ಭ್ರಮ್ ಸರ್ವಗುಣ್ ಸಂಪನ್ನ' ದಲ್ಲಿ ಶ್ರೇನು ಪಾರೀಖ್ ಎದುರು ಕಬೀರ್ ಮಿಟ್ಟಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. == ಮಾಧ್ಯಮ == ಝೈನ್ ಇಮಾಮ್ ರವರು ಈಸ್ಟರ್ನ್ ಐ ನ ಸೆಕ್ಸಿಯೆಸ್ಟ್ ಏಷಿಯನ್ ಮೆನ್ ಲಿಸ್ಟ್ ೨೦೧೮ ರಲ್ಲಿ ೨೬ ನೇ ಸ್ಥಾನವನ್ನು ಪಡೆದುಕೊಂಡರು.ಇಂಡಿಯನ್ ಟೆಲಿವಿಷನ್ ೨೦೧೮ ರಲ್ಲಿ ಟೈಮ್ಸ್ ಆಫ್ ಇಂಡಿಯಾ ಟಾಪ್ ೨೦ ಅತ್ಯಂತ ಅಪೇಕ್ಷಣೀಯ ಪುರುಷರ ಪಟ್ಟಿಯಲ್ಲಿ ೫ ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. == ದೂರದರ್ಶನ == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖ == 9. 9: 2022-06-08 ವೇಬ್ಯಾಕ್ ಮೆಷಿನ್ ನಲ್ಲಿ.